ಕರ್ಷಣ ೧ : ವಾಯುಮಂಡಲದ ಮೂಲಕ ಒಂದು ವಸ್ತು ಸಾಗುವಾಗ ಅದು ನಿರೋಧಬಲ ಈನ್ನು ಅನುಭವಿಸುತ್ತದೆ. ಗಾಳಿಯ ಅಣುಗಳು ವಸ್ತುವಿನ ಚಲನೆಯನ್ನು ವಿರೋಧಿಸುವುದೇ ಇದರ ಕಾರಣ. ನಿರೋಧಬಲ ಈನ್ನು ಎರಡು ಘಟಕಗಳಾಗಿ ಒಡೆಯಬಹುದು. ಮೊದಲನೆಯದು ನೆಗಪು (ಲಿಫ್ಟ್‌) (ಐ). ಇದು ಸಾಮಾನ್ಯವಾಗಿ ಊಧರ್ವ್‌ ದಿಶೆಯಲ್ಲಿದ್ದು ವಸ್ತುವಿನ ತೂಕವನ್ನು ವಿರೋಧಿಸುತ್ತದೆ. ಎರಡನೆಯದೇ ಕರ್ಷಣ (ಡ್ರ್ಯಾಗ್) (ಆ). ಇದು ಚಲನದಿಶೆಗೆ ವಿರುದ್ಧ ದಿಶೆಯಲ್ಲಿ ವರ್ತಿಸುತ್ತದೆ. 

ನೆಗಪು ಅಪೇಕ್ಷಣೀಯ; ಆದರೆ ಕರ್ಷಣವು ಶಕ್ತಿಯ ಅನಿವಾರ್ಯ ಹ್ರಾಸವನ್ನು ಸೂಚಿಸುವುದು. ವಿಮಾನಗಳ ರಾಟದಲ್ಲಿ ಈ ಹ್ರಾಸವನ್ನು ಪಡೆಯಲು ಬೇಕಾಗುವ ಶಕ್ತಿಯನ್ನು ಅದರ ಯಂತ್ರ ಪುರೈಸಬೇಕು. ಗರಿಷ್ಠನೆಗಪು: ಕರ್ಷಣ ಈ ನಿಷ್ಟತ್ತಿ ಅಧಿಕ ಮೌಲ್ಯದ್ದಾಗಿದ್ದರೆ ಉತ್ತಮ. ಕಾರಣ, ಒಂದು ವಿಮಾನದ ಸಾಮಾನ್ಯವಾದ ಮಟ್ಟಸ ಹಾರಾಟದಲ್ಲಿ ರೆಕ್ಕೆಗಳ ನೆಗಪು ಸರಿಸುಮಾರಾಗಿ ವಿಮಾನದ ಪೂರ್ಣ ತೂಕವನ್ನು ಸರಿದೂಗಿಸುತ್ತದೆ. ಈ ನೆಗಪನ್ನು ಪುರೈಸುವ ಹಾಗೂ ಕರ್ಷಣವನ್ನು ಮೀರಿ ಸಾಗುವ ಕನಿಷ್ಠ ಯಂತ್ರ ಸಾಮರ್ಥ್ಯ(ಮಿನಿಮಮ್ ಎಂಜಿನ್ ಪವರ್)  ಉಳ್ಳದ್ದೇ ದಕ್ಷತಮ ಎಂಜಿನ್. 	(ಎಚ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ